ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಪೂರ್ವಾಶ್ರಮದ ಸಹೋದರ ಶ್ರೀಸುರೋತ್ತಮ ತೀರ್ಥರ ಪರಂಪರೆಯ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರ ಆತ್ಮೀಯ ಆಹ್ವಾನದ ಮೇರೆಗೆ ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರು ಬೆಂಗಳೂರಿನ ಭಂಡಾರಕೇರಿ ಮಠದ ಶ್ರೀಭಾಗವತ ಕೀರ್ತಿಧಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸೋದೆ ಮಠದ ಗ್ರಂಥಾಲಯದಲ್ಲಿ ಸಂರಕ್ಷಿಸಿದ ಶ್ರೀ ಸುರೋತ್ತಮ ತೀರ್ಥರ ಸಾಕ್ಷಾತ್ ಶಿಷ್ಯರಾದ ಶ್ರೀವಿಶ್ವೋತ್ತಮ ತೀರ್ಥರು ರಚಿಸಿರುವ ಶ್ರೀನ್ಯಾಯಸುಧಾ ಗ್ರಂಥದ ಟಿಪ್ಪಣಿಯ ಹಸ್ತಪ್ರತಿಯನ್ನು ಶ್ರೀ ವಿಶ್ವವಲ್ಲಭ ತೀರ್ಥರು ಶ್ರೀ ವಿದ್ಯೇಶ ತೀರ್ಥರಿಗೆ ಹಸ್ತಾಂತರಿಸಿದರು.Sri Vidyesh Teertha Sri Vishwallabha Teertha Sripada, Sri Surotthama Theertha, Bhandarkeri Muttha, brother of Bhavismira Srivadiraja Gurusarvabhouma ancestral ashram, Sri Vishwaallabha Tirtha, Sri Bengaluru's Bhagavatha Kirtidha, Bhandarakeri Mutt, Bangalore. They visited. On this occasion, Sri Vishwallabha Teertha handed over the handcraft of Shree Vishwottama Teertha's Sakshat disciple of Sri Surotthama Teertha preserved at the library of Sode Mutt.