ಸಂನ್ಯಾಸ ಸ್ವೀಕಾರ ಮಾಡಿ ಮೊದಲ ಬಾರಿಗೆ ಸೋದಾ ಕ್ಷೇತ್ರಕ್ಕೆ ಆಗಮಿಸಿದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ವೇದಘೋಷಗಳೊಂದಿಗೆ ಸ್ವಾಗತಿಸಿ ರಮಾ ತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಹಾಗೂ ಭೂತರಾಜರ ದರ್ಶನವನ್ನು ಮಾಡಿಸಿದರು. ಶ್ರೀವೇದವರ್ಧನ ತೀರ್ಥರು ತಮ್ಮ ಮೊದಲ ಚಾತುರ್ಮಾಸ್ಯ ವ್ರತವನ್ನು ಶ್ರೀವಿಶ್ವವಲ್ಲಭ ತೀರ್ಥರೊಂದಿಗೆ ಸೋದಾ ಕ್ಷೇತ್ರದಲ್ಲಿ ನಡೆಸಲಿದ್ದಾರೆ.