ಕರ್ನಾಟಕ ವಿಧಾನಸಭಾಧ್ಯಕ್ಷರಾದ ಶ್ರೀವಿಶ್ವೇಶ್ವರ ಹೆಗಡೆ ಕಾಗೇರಿಯವರು ಸೋದೆ ಶ್ರೀವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾ ತ್ರಿವಿಕ್ರಮ ದೇವರ, ಶ್ರೀವಾದಿರಾಜಗುರುರಾಜರ ಹಾಗೂ ಶ್ರೀಭೂತರಾಜರ ದರ್ಶನ ಪಡೆದರು. ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರನ್ನು, ಭೀಮನಕಟ್ಟೆ ಮಠಾಧೀಶರಾದ ಶ್ರೀರಘುವರೇಂದ್ರ ತೀರ್ಥರನ್ನು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರನ್ನು ಭೇಟಿಮಾಡಿ ಫಲಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಕಾಗೇರಿಯವರ ಪತ್ನಿ ಶ್ರೀಮತೀ ಭಾರತಿ, ಸೋಂದಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತೀ ಮಮತಾ,ಉಪಾಧ್ಯಕ್ಷ ಗಜಾನನ ನಾಯಕ್,ಸದಸ್ಯರಾದ ಮಂಜುನಾಥ ಭಂಡಾರಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನರಸಿಂಹ ಹೆಗಡೆ ಹಾಗೂ ಮಠದ ವ್ಯವಸ್ಥಾಪಕರಾದ ಶ್ರೀರಾಧಾರಮಣ ಉಪಾಧ್ಯಾಯರು ಉಪಸ್ಥಿತರಿದ್ದರು.