Sodematha

ಶ್ರೀ ವಿಶ್ವೇಂದ್ರ ತೀರ್ಥರ ಆರಾಧನೆ ಮತ್ತು ಮೂಲವೃಂದಾವನವಿರುವ ಉಡುಪಿ ಸಮೀಪದ ಉದ್ಯಾವರ ಸೋದೆ ಮಠದಲ್ಲಿ ಹಾಗೂ ಸೋದೆಯಲ್ಲಿರುವ ಅವರ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪೂಜೆ ನೆರವೇರಿತು

14 Oct, 2021

ಕನ್ಯಾ ಮಾಸದ ನವಮೀ ತಿಥಿ ಸೋದೆ ವಾದಿರಾಜ ಮಠದ ಯತಿ ಪರಂಪರೆಯಲ್ಲಿ ವಿರಾಜಮರಾಗಿದ್ದ , ಶ್ರೀ ವಿಶ್ವೋತ್ತಮ ತೀರ್ಥರಂತಹ ಶ್ರೇಷ್ಠ ಯತಿಗಳನ್ನು ಜಗತ್ತಿಗೆ ಕೊಟ್ಟಂತಹ ಶ್ರೀ ವಿಶ್ವೇಂದ್ರ ತೀರ್ಥರ ಆರಾಧನೆ. ಅವರ ಮೂಲವೃಂದಾವನವಿರುವ ಉಡುಪಿ ಸಮೀಪದ ಉದ್ಯಾವರ ಸೋದೆ ಮಠದಲ್ಲಿ ಹಾಗೂ ಸೋದೆಯಲ್ಲಿರುವ ಅವರ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪೂಜೆ ನೆರವೇರಿತು. ಅಷ್ಟ ಮಠದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಲೌಕಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದವರು ಶ್ರೀ ವಿಶ್ವೇಂದ್ರ ತೀರ್ಥರು. ಉಡುಪಿ ಸಮೀಪದ ಇನ್ನಂಜೆಯಂತಹ ಗ್ರಾಮೀಣ ಪ್ರದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಪ್ರೌಢ ಶಾಲೆ ಎಂಬ ಸನಿವಾಸ ಶಾಲೆಯನ್ನು ಸ್ಥಾಪಿಸಿದ ಕೀರ್ತಿ ಇವರದ್ದು. ಆ ಕಾಲದಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವಲ್ಲಿ ಅವರು ಯಶಸ್ವಿಯಾಗಿದ್ದರು. ಕನ್ನಡದಲ್ಲಿ ಅನೇಕ ಕೀರ್ತನೆಗಳನ್ನೂ ರಚಿಸಿದ್ದಾರೆ. ಆಯುರ್ವೇದ ಶಾಸ್ತ್ರದಲ್ಲಿ ಆಳವಾದ ಪಾಂಡಿತ್ಯವಿತ್ತು. ಶ್ರೀಮಠದಲ್ಲಿಯೇ ಅನೇಕ ಕಷಾಯ ಔಷಧಿಗಳನ್ನು ತಯಾರಿಸುತ್ತಿದ್ದರು. "ಯುಕ್ತಿಮಲ್ಲಿಕಾ ಸೌರಭ ಪ್ರಕಾಶಿನೀ"ಎಂಬ ವಿದ್ವತ್ ಸಭೆಯನ್ನು ನಡೆಸುತ್ತಿದ್ದರು.