Sodematha

ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವ

16 Jan, 2020

ಪರ್ಯಾಯ ಪೂರ್ವಭಾವಿಯಾಗಿ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಶೀರೂರು ಮೂಲಮಠಕ್ಕೆ ದ್ವಂದ್ವ ಮಠಾಧೀಶರಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆಮಂತ್ರಿಸಿ ಅದಮಾರು ಮಠದ ಚತುರ್ಭುಜ ಕಾಲಿಯಮರ್ದನ ಕೃಷ್ಣದೇವರ ಪೂಜೆಯನ್ನು ನೆರವೇರಿಸಿ ಶ್ರೀಮಠದ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶೀರೂರು ಗ್ರಾಮಸ್ಥರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವವನ್ನು ಸಮರ್ಪಿಸಿದರು.