ಶೀರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಲಿರುವ ಅನಿರುದ್ಧ ಸರಳತ್ತಾಯರು ಶ್ರೀಕೃಷ್ಣಮುಖ್ಯಪ್ರಾಣ ದೇವರ ದರ್ಶನವನ್ನು ಪಡೆದು ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರನ್ನು, ಕೃಷ್ಣಾಪುರ ಮಠಾಧೀಶರನ್ನು , ಪಲಿಮಾರು ಉಭಯ ಮಠಾಧೀಶರನ್ನು, ಅದಮಾರು ಹಿರಿಯ ಮಠಾಧೀಶರನ್ನು ಹಾಗೂ ಕಾಣಿಯೂರು ಮಠಾಧೀಶರನ್ನು ಭೇಟಿ ಮಾಡಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಟುವಿನ ತಂದೆ ವಿದ್ವಾನ್ ಉದಯಕುಮಾರ್ ಸರಳತ್ತಾಯ ಹಾಗೂ ತಾಯಿ ಶ್ರೀವಿದ್ಯಾ ಉಪಸ್ಥಿತರಿದ್ದರು.