ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಸಂನ್ಯಾಸ ಸ್ವೀಕರಿಸಿ ಮೊದಲ ಬಾರಿಗೆ ಸೋದಾ ಕ್ಷೇತ್ರಕ್ಕೆ ಆಗಮಿಸಿ ರಮಾ ತ್ರಿವಿಕ್ರಮದೇವರ , ಭಾವಿಸಮೀರ ಶ್ರೀವಾದಿರಾಜರ ಹಾಗೂ ಶ್ರೀಭೂತರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆತ್ಮೀಯವಾಗಿ ಸ್ವಾಗತಿಸಿ ಶ್ರೀಮಠದ ಗೌರವ ಸಲ್ಲಿಸಿದರು.