Sodematha

"ಮನೆಮನೆಯಲ್ಲಿ ಲಕ್ಷ್ಮೀಶೋಭಾನೆ ಯಜ್ಞ" ಮೂರನೆಯ ದಿನ

02 Oct, 2019

"ಮನೆಮನೆಯಲ್ಲಿ ಲಕ್ಷ್ಮೀಶೋಭಾನೆ ಯಜ್ಞ" ಅಭಿಯಾನವನ್ನು ನವರಾತ್ರಿಯ ಮೂರನೆಯ ದಿನ ಅಕ್ಟೋಬರ್ 1  ಮಂಗಳವಾರದಂದು ಕೋಟೇಶ್ವರದ ಬಡಾಕೆರೆ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೋಟೇಶ್ವರ ಮಾಗಣೆಯ ತೆಕ್ಕಟ್ಟೆ, ಕುಂಭಾಸಿ,ಕೊರವಡಿ,ಬೀಜಾಡಿ,ದೊಡ್ಮನೆಬೆಟ್ಟು ಹಾಗೂ ಬಡಾಕೆರೆ ಗ್ರಾಮದ ಭಜನಾಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ರಾಮಚಂದ್ರ ವರ್ಣ ಹಾಗೂ ಸೀತಾರಾಮ ಧನ್ಯರು ಕಾರ್ಯಕ್ರಮವನ್ನು ಸಂಯೋಜಿಸಿದರು.