ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಿಲಾಮಯ ಮಂದಿರದ ಗರ್ಭಗುಡಿಗೆ ಪಾದುಕನ್ಯಾಸವನ್ನು ಶ್ರೀವಿಶ್ವವಲ್ಲಭ ತೀರ್ಥರು ನೆರವೇರಿಸಿದರು. ಈ ಸಂದರ್ಭದಲ್ಲಿ ಹೂವಿನಕೆರೆ ವಾದಿರಾಜ ಮಠದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಕೋಟೇಶ್ವರ ಮಾಗಣೆಯ ಮುಖ್ಯಸ್ಥರು ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಅವಧಾನಿ ಸುಬ್ರಹ್ಮಣ್ಯ ಭಟ್ಟರ ಮಾರ್ಗದರ್ಶನದಲ್ಲಿ ಎಲ್ಲೂರು ವಿಷ್ಣುಮೂರ್ತಿ ಭಟ್ಟರು ಮಂದಿರ ನಿರ್ಮಾಣದ ಕಾಮಗಾರಿಯನ್ನು ನಡೆಸುತ್ತಿದ್ದಾರೆ. Sri Vishwavallabha Thirtha Swamiji of Sri Sode Vadiraja Matha performed "Paadukanyaasa" ritual for the Garbhagruha of new Shilamaya Temple premises, being constructed with estimated cost of Rs. One crore, at Hoovinakere, birth place Sri Vadiraja Gurusaarvabhoumaru. On this holy occasion, office bearers of Administrative committee of Hoovinakere Vadiraja Matha, Dignitaries of Koteshwara Maagane and Daivajna Brahmin community were present. Sri Yelluru Vishnumurthy Bhat is overseeing the construction work under able guidance of Sri Avadhani Subramanya Bhat, Vaasthu Consultant.