Sodematha

ಪಟ್ಟಾಭಿಷಿಕ್ತರಾಗಿ ಉಡುಪಿ ಪುರಪ್ರವೇಶ ಮಾಡಿದ ಶ್ರೀ ವೇದವರ್ಧನ ತೀರ್ಥರು

16 May, 2021

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾಗಿ ಉಡುಪಿ ಪುರಪ್ರವೇಶ ಮಾಡಿದ ಶ್ರೀ ವೇದವರ್ಧನ ತೀರ್ಥರು ಉಡುಪಿಯ ಶೀರೂರು ಮಠಕ್ಕೆ ಸೋದೆ ಶ್ರೀವಿಶ್ವವಲ್ಲಭ ತೀರ್ಥರ ಜೊತೆಯಾಗಿ  ಆಗಮಿಸಿ ಪಟ್ಟದ ದೇವರಾದ ಶ್ರೀರುಗ್ಮಿಣೀ ಸತ್ಯಭಾಮಾ ಸಹಿತ ವಿಟ್ಠಲ ದೇವರನ್ನು ಪೂಜಿಸಿದರು. ನಂತರ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥರನ್ನು , ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥರನ್ನು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥರನ್ನು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥರನ್ನು ಭೇಟಿಯಾಗಿ ದಂಡ ನಮಸ್ಕಾರವನ್ನು ಮಾಡಿ ಶ್ರೀಮಠದ ಗೌರವವನ್ನು ಸಮರ್ಪಿಸಿದರು. ಎಲ್ಲಾ ಮಠಾಧೀಶರೂ ಕೂಡ ನೂತನ ಪೀಠಾಧಿಪತಿಗಳನ್ನು ಗೌರವಿಸಿದರು. ಸೋದೆ ಮಠದ ದಿವಾನರಾದ ಶ್ರೀನಿವಾಸ ತಂತ್ರಿಗಳು , ಶೀರೂರು ಮಠದ ದಿವಾನರಾದ ಉದಯಕುಮಾರ ಸರಳತ್ತಾಯರು ಹಾಗೂ ವಿದ್ವಾಂಸರು ಉಪಸ್ಥಿತರಿದ್ದರು.