ನಮ್ಮೆಲ್ಲರ ಮೂಲ ಗುರುಗಳಾದ ಶ್ರೀ ಮಧ್ವಾಚಾರ್ಯರು ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರಿಗೆ ಸಮ್ಮತವಾದ ಗಣಿತ ಆಧಾರಿತ ತಿಥಿ ನಿರ್ಣಯ ಪಂಚಾಂಗವು ಶ್ರೀ ಸೋದೆ ವಾದಿರಾಜ ಮಠದ ಅಧಿಕೃತ ಪಂಚಾಂಗವಾಗಿದೆ. ಈ ಪಂಚಾಂಗ ಆಧರಿಸಿದ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಒಂದು ಸಿದ್ಧವಾಗಿದ್ದು, ಇದರಲ್ಲಿ ಪ್ರತಿದಿನದ ತಿಥಿ ವಾರ ನಕ್ಷತ್ರ, ಯೋಗ ಕರಣ ಮುಂತಾದ ಮಾಹಿತಿಗಳು, ಪ್ರಮುಖ ದಿನ ವಿಶೇಷಗಳನ್ನು ನೋಡಬಹುದಾಗಿದೆ. ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಗಣೇಶ್ ಹತ್ವಾರ್, ಶಮಿತ್ ಜೋಶಿ, ಸೂರಜ್ ಮತ್ತು ಕೃಷ್ಣಮೂರ್ತಿ ಭಾಗವತ್ ಎಂಬ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದು, ಇತ್ತೀಚಿಗೆ ಕಾಲೇಜಿನಲ್ಲಿ ನಡೆದ ಎಂಟನೇ ಪದವಿಪ್ರದಾನ ಸಮಾರಂಭದಲ್ಲಿ ಶ್ರೀಪಾದರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಲೋಕಾರ್ಪಣೆಗೊಳಿಸಿದರು.ಶ್ರೀಮಠದ ಭಕ್ತರು ಹಾಗೂ ಸಾಧಕ ಸಜ್ಜನರು ಈ ಕೆಳಗಿನ ಲಿಂಕ್ ಅನ್ನು ಬಳಸಿಕೊಂಡು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದುAPP LINK : https://play.google.com/store/apps/details?id=com.krishna.panchanga_app&fbclid=IwAR1S1YJLb82UuwmGzEQaJTd8T8IFTHp_1FhiRNgizhI0Q5kcXNSFMAlXJOw