Sodematha

ತೀರ್ಥಪ್ರಬಂಧದ ಶ್ಲೋಕಗಳನ್ನು ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ

14 Aug, 2022

ಭಾವಿಸಮೀರ ಶ್ರೀವಾದಿರಾಜರು ರಚಿಸಿದ ತೀರ್ಥಪ್ರಬಂಧದ ಶ್ಲೋಕಗಳನ್ನು ಆಯಾ ಕ್ಷೇತ್ರಗಳಲ್ಲಿ ಶಿಲಾ ಫಲಕದಲ್ಲಿ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಡುಪಿ ಕೃಷ್ಣನ ಸನ್ನಿಧಿಯಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಅನಾವರಣಗೊಳಿಸಿ ಶ್ರೀಕೃಷ್ಣದೇವರಿಗೆ ಸಮರ್ಪಿಸಿದರು. ಪಾಜಕ ಕ್ಷೇತ್ರದಲ್ಲಿ ಹಾಗೂ ಹೂವಿನಕೆರೆ ಕ್ಷೇತ್ರದಲ್ಲಿಯೂ ಫಲಕವನ್ನು ಅನಾವರಣಗೊಳಿಸಲಾಯಿತು.