Sodematha

ಎಸ್ ವಿ ಎಚ್ ಪದವಿಪೂರ್ವ ಕಾಲೇಜು ನೂತನ ಕಟ್ಟಡ ಲೋಕಾರ್ಪಣೆ

08 Oct, 2021

ಸೋದೆ ಶ್ರೀ ವಾದಿರಾಜ ಶಿಕ್ಷಣ ಪ್ರತಿಷ್ಠಾನದಿಂದ ಪ್ರವರ್ತಿತವಾದ, ಇನ್ನಂಜೆಯಲ್ಲಿ ಕಾರ್ಯಾಚರಿಸುತ್ತಿರುವ ಎಸ್.ವಿ.ಎಚ್. ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವು ದಿ. 08 -10-2021ನೇ ಶುಕ್ರವಾರ ನೆರವೇರಿತು. ಲೋಕಾರ್ಪಣೆಯನ್ನು ನೆರವೇರಿಸಿ, ಬಳಿಕ ನಡೆದ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರೂ ಆದ, ಸೋದೆ ಶ್ರೀ ವಾದಿರಾಜ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡುತ್ತಾ, ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಹಿಂದೆಲ್ಲಾ ಹಲವು ಊರಿಗೆ ಒಂದು ಶಾಲೆ ಇದ್ದರೆ, ಇಂದು ಒಂದೇ ಊರಲ್ಲಿ ಹಲವಾರು ಶಾಲೆಗಳು ಇದ್ದು ಅವುಗಳಲ್ಲಿ ಉತ್ತಮ ಗುಣಮಟ್ಟದ ಶಾಲೆಗಳನ್ನು ಗುರುತಿಸಲು ಜನಗಳು ಹಂಸ ಕ್ಷೀರ ನ್ಯಾಯದಂತೆ ಗುಣಗ್ರಾಹಿಗಳಾಗಬೇಕು. ಯಾವ ಶಿಕ್ಷಣ ಸಂಸ್ಥೆಯಿಂದ ಪ್ರಬುದ್ಧ ವಿದ್ಯಾರ್ಥಿಗಳು ಹೊರಬಂದು ಸಮಾಜಕ್ಕೆ ಕೊಡುಗೆ ನೀಡುತ್ತಾರೋ ಅಂತಹ ವಿದ್ಯಾಸಂಸ್ಥೆಯು ಗುಣಮಟ್ಟದ ಸಂಸ್ಥೆ ಎಂದು ತಿಳಿದುಕೊಳ್ಳಬಹುದು. ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪಿತವಾದ ಇನ್ನಂಜೆಯ ವಿದ್ಯಾ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು “ನಾಸಾ”ದಂತಹ ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಈ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇಂದಿನ ಕಾಲಕ್ಕೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ನೂತನ ಕಟ್ಟಡದ ನಿರ್ಮಾಣದ ಮೂಲಕ, ಇನ್ನೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ನಮ್ಮ ಬದ್ದತೆಯನ್ನು ದೃಢಪಡಿಸುತ್ತಿದೆ. ಇನ್ನಂಜೆಯ ವಿದ್ಯಾಸಂಸ್ಥೆಗಳಿಂದ ಈ ಹಿಂದೆ ಸಮಾಜಕ್ಕೆ ಸಂದ ಕೊಡುಗೆಯಂತೆ ಇನ್ನು ಮುಂದೆಯೂ ಕೂಡ ಸಮಾಜಮುಖಿಯಾಗಿ ಸಂಸ್ಥೆ ಬೆಳೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇನ್ನಂಜೆ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಯಾದ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಅಧ್ಯಕ್ಷರಾದ ಶ್ರೀ ಯು.ಕೆ. ಭಟ್ ಮಾತನಾಡುತ್ತಾ, ತನ್ನ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕು ಹಾಕಿದರು. ಆಗಿನ ಕಾಲದ ಶಿಕ್ಷಕರಲ್ಲಿ ಇದ್ದ ಬದ್ಧತೆ, ವಿದ್ಯಾರ್ಥಿಗಳ ಬಗ್ಗೆ ಇದ್ದ ಕಾಳಜಿ ಇದರ ಫಲವಾಗಿ ತಾನು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು. ಅಲ್ಲದೇ ಈ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.ಇನ್ನೋರ್ವ ಮುಖ್ಯ ಅತಿಥಿ, ಬಿಳಿಯಾರು ಗೋವಿಂದ ಭಟ್ ಪ್ರತಿಷ್ಠಾನದ ಪ್ರತಿನಿಧಿಯಾದ ಶ್ರೀ ಬಿಳಿಯಾರು ಪದ್ಮನಾಭ ಭಟ್ ಸಂಸ್ಥೆಗೆ ಶುಭ ಹಾರೈಸಿದರು. ಸೋದೆ ಶ್ರೀ ವಾದಿರಾಜ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಮಾತನಾಡುತ್ತಾ, ಸೋದೆ ಶ್ರೀ ವಾದಿರಾಜ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಬೆಳಕು ಚೆಲ್ಲುತ್ತಾ, ಇನ್ನಷ್ಟು ಪ್ರಗತಿ ಹೊಂದಲು ವಿದ್ಯಾಭಿಮಾನಿಗಳು, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರವನ್ನು ಕೋರಿದರು. ಹಾಗೂ ಈ ಎಲ್ಲಾ ಬೆಳವಣಿಗೆಗಳ ಹಿಂದೆ ಪೂಜ್ಯ ಸೋದೆ ಶ್ರೀಪಾದರ ಕರ್ತೃತ್ವ ಶಕ್ತಿ ಕೆಲಸ ಮಾಡುತ್ತಿದ್ದು ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ದಿ ಆಗಲಿ ಎಂದು ಆಶಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪುಂಡರೀಕಾಕ್ಷ ಕೊಡಂಚರು ಸ್ವಾಗತಿಸಿದರು. ಕಾಲೇಜಿನ ಹಿಂದಿ ಉಪನ್ಯಾಸಕರಾದ ಶ್ರೀ ರಾಜೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಎಸ್.ವಿ.ಎಚ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನಟರಾಜ ಉಪಾಧ್ಯಾಯರು ವಂದನಾರ್ಪಣೆ ಮಾಡಿದರು. SVH PU College Innanje, managed by Shri Sode Vadiraja Mutt Education Trust Udupi, witnessed the inauguration of its newly constructed building on 08 October 2021. His Holiness Shri Vishwavallabha Theertha Swamiji of Shri Sode Vadiraja Matha inaugurated the new building. During his speech, he opined that the educational institutions play important role in developing matured civic society. There were days where educational institutions were very few and all were committed for the quality of education. But today we find educational institutions in nuke and corner of the village. People should be wise enough to decide which institution is good by seeing the quality and maturity of its students. It is matter of pride that, proud students of the SVH group of institutions have been contributing to the society across the globe in various fields including renowned NASA. Swamiji also expressed the commitment of the Trust in imparting quality education and as a part of continuous efforts this new full-fledged building has been constructed. He wished that the legacy of quality education and thereby contributing to the better society to continue in the coming days.Chief Guest of the days, Shri U.V. Bhat, Former Chairman of Karnataka Bank who is also alumnus of SVH institutions cherished his student days in the campus and wholeheartedly acknowledged the contributions of his teachers in making his successful professional.Shri Padmanabha Bhat, Trustee of Biliyaru Govinda Bhat Trust, conveyed his best wishes to the development of the institution.Shri Rathnakumar, Secretary of SSVMET gave an overview of positive developments happening in various institutions under the Trust and requested the support of all philanthropists, well-wishers, Alumni members to take these institutions to the greater heights. He also humbly admitted that, the driving force behind all these positive developments is none other than Shri Swamiji and also wished that, the institution to reach greater heights under the able guidance of Shri Swamiji.Principal of SVH PU College Prof. Pundarikaksha Kodancha welcomed the gathering and Prof. Rajendra Prabhu, faculty member, Department of Hindi compeered the program. Shri Nataraja Upadhyaya, Principal SVH Kannada Medium School proposed vote of thanks.