Sodematha

UNICOURT DAY Celebration at SMVITM

21 Mar, 2023

*UNICOURT DAY Celebration at SMVITM*In the presence of H.H Shri Vishwavallabha Theertha Swamiji, the CTO & Co Founder Shri Prashanth Shenoy (Unicourt India), Mangalore Infotech Solutions Private Limited, Software Development, Mangalore, celebrated Unicourt Day on 21st March, 2023 at SMVITM campus along with Unicourt Team. Management, Staff & Students of SMVITM also witnessed this celebration. Also a Memorandum of Understanding (MoU) signed between SMVITM and Mangalore Infotech Ltd. in the presence of revered swamiji.CTO & Co Founder Shri Prashanth Shenoy addressed the gathering, stated that we are in IT challenge era. We have to gear up ourselves to face the modern challenges. Unicourt day in organized to create such awareness amongst students. He also expressed his happiness towards Swamiji’s institute in connecting SMVITM to Unicourt India team. Swamiji in his presidential remarks spoke about today’s world smartness.He narrated the story of how the word “Bugs” came in to computer world. He called students to utilize such opportunities created by college and grow as strong performer of tomorrows. He thanked unicourt team for organizing such meaningful event at campus*ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುನಿಕೋರ್ಟ್ ದಿನ 2023* ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 21 ಮಾರ್ಚ್ 2023 ರಂದು ಯುನಿಕೋರ್ಟ್ ದಿನವನ್ನು ಪೂಜ್ಯ ಶ್ರೀಪಾದರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಇನ್ಫೋಟೆಕ್ ಸೊಲ್ಯೂಷನ್‌ನ (ಯುನಿಕೋರ್ಟ್ ಇಂಡಿಯಾ) ಸಹ ಸಂಸ್ಥಾಪಕರಾದ ಶ್ರೀ ಪ್ರಶಾಂತ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶ್ರೀ ಪ್ರಶಾಂತ್ ಶೆಣೈ ಇವರು ಮಾತನಾಡಿ ನಾವು ಈಗ ಐಟಿ ಸವಾಲಿನ ಯುಗದಲ್ಲಿದ್ದೇವೆ ಎಂದು ತಿಳಿಸಿದರು. ಆಧುನಿಕ ಸವಾಲುಗಳನ್ನು ಎದುರಿಸಲು ನಮ್ಮನ್ನು ನಾವು ಸಜ್ಜುಗೊಳಿಸಬೇಕು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಯುನಿಕೋರ್ಟ್ ಇಂಡಿಯಾ ಸಂಸ್ಥೆಯ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲು ಅವಕಾಶ ಕಲ್ಪಿಸಿದಕ್ಕಾಗಿ ಧನ್ಯವಾದ ತಿಳಿಸಿದರು. ಎಂದು ತಿಳಿಸಿದರು.ಶ್ರೀ ಸೋದೆ ಮಠದ ಶ್ರೀಪಾದರು ಮಾತನಾಡಿ ಇಂದಿನ ಸಮಾಜದ ಸ್ಮಾರ್ಟ್‌ಸ್ ಕುರಿತು ಮಾತನಾಡಿದರು. ಮತ್ತು ಕಂಪ್ಯೂಟರ್ ಜಗತ್ತಿನಲ್ಲಿ “ಬಗ್ಸ್” ಎಂಬ ಪದವು ಹೇಗೆ ಬಂದಿತು ಎಂಬುದರ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಕಾಲೇಜು ನೀಡಿರುವ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಳಿನ ಬಲಿಷ್ಠ ಸಾಧಕರಾಗಿ ಬೆಳೆಯಬೇಕು ಎಂದು ತಿಳಿಸಿದರು. ಕಾಲೇಜಿನಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಯುನಿಕೋರ್ಟ್ ತಂಡಕ್ಕೆಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಯುನಿಕೋರ್ಟ್ ಸಂಸ್ಥೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಒಡಂಬಡಿಕೆ ಸಹಿ ಹಾಕಲಾಯಿತು.