ವಿಜಯಪುರದ ಕೋರವಾರದಲ್ಲಿ ಶ್ರೀ ಹನುಮಂತ ದೇವರ ಸನ್ನಿಧಿಗೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಆಗಮಿಸಿದಾಗ ವೈಭವದಿಂದ ಸ್ವಾಗತಿಸಿದರು. ಅಗಸ್ತ್ಯ ಮುನಿಗಳು ಪೂಜಿಸಿದ ಈ ಹನುಮಂತ ದೇವರನ್ನು ಶ್ರೀವಾದಿರಾಜರು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇಲ್ಲಿದೆ. ಈ ನಿಮಿತ್ತವಾಗಿ ದೇವಳದ ಅರ್ಚಕ ಮನೆತನದವರು ಶ್ರೀಗಳವರನ್ನು ಸ್ವಾಗತಿಸಿ ಗೌರವಿಸಿದರು. ಕೋರವಾರೇಶ ಹನುಮಂತ ದೇವರಿಗೆ ಶ್ರೀಗಳವರು ಪಂಚಾಮೃತ ಅಭಿಷೇಕ ನಡೆಸಿ ಕ್ಷೇತ್ರದ ವಿಶೇಷ ಪದ್ಧತಿಯಾದ ಭೀಮ ನೈವೇದ್ಯವನ್ನು ಸಮರ್ಪಿಸಿದರು.Sri Vishwavallabha Thirtha Swamiji of Sri Sode Vaadiraja Matha visited Hanuman Temple of Koravara, Vijayapura.He was given warm welcome by the devotees and the family of priests. Idol of Lord Hanumantha ,which was earlier worshipped by Agasthya Muni, is reported to have been installed by Sri Vaadiraja Swamiji. Sri Sode Swamiji performed panchamrutha Abhisheka to Koravaaresha Hanuman deity and also offered Bhima Naivedya, a special ritual of this holy centre.