150 ವರ್ಷಗಳ ಇತಿಹಾಸವುಳ್ಳ ಕಡಿಯಾಳಿ ಹಿರಿಯ ಪ್ರಾರ್ಥಮಿಕ ಶಾಲೆಯ ಆಡಳಿತ ಜವಾಬ್ದಾರಿಯನ್ನು 2018 ರಲ್ಲಿ ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ವಹಿಸಿಕೊಂಡಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ - ಬೆಳೆಸುವ ನಿಟ್ಟಿನಲ್ಲಿ, ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಆಶಯದಿಂದ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಟ್ರಸ್ಟಿನ ಆಡಳಿತ ಮಂಡಳಿಯು ಅನೇಕ ನುರಿತ ಶಿಕ್ಷಕರನ್ನು ನೇಮಕಾತಿ ಮಾಡಿದೆ. ಇದಲ್ಲದೇ 2020 ರಲ್ಲಿ ಶಿವಳ್ಳಿ ಗ್ರಾಮದ ಆಸು ಪಾಸಿನ ವಿದ್ಯಾರ್ಥಿಗಳಿಗೆ ಸಮಂಜಸ ಶಾಲಾ ಶುಲ್ಕದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕೆಂದು ಕಡಿಯಾಳಿ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದಲ್ಲದೇ, ಅಂದಾಜು 2 ಕೋಟಿ ವೆಚ್ಚದಲ್ಲಿ ನೂತನ ಸುಸಜ್ಜಿತ ಶಾಲಾ ಕಟ್ಟಡದ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಈ ಎಲ್ಲಾ ಬೆಳವಣಿಗೆಯ ಮಧ್ಯದಲ್ಲಿ ತಾ 17-10-2022 ರಂದು ಶಾಲಾ ಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಶಾಲಾ ವಾಹನವನ್ನು ಶ್ರೀ ಸೋದೆ ವಾದಿರಾಜ ಮಠದ ವತಿಯಿಂದ ಶ್ರೀಪಾದರು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ಇದರ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಅಡಿಗ ಹಾಗೂ ಶಾಲೆಯ ಮುಖ್ಯೋಪಾದ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.Sri Sode Vadiraja Mutt Education Trust took over the administration responsibility of Kadiyali Senior Prayer School with 150 years of history. Save Kannada Medium School, President Sri Sri Vishwallabha Teertha Sripada and Trust's Administration Board have appointed many skilled teachers in the hope of providing good quality education to school children. Not only this, Kadiyali English Medium School was started to provide English medium education to students of Shivalli village at reasonable school fees in 2020, the construction of a new well equipped school building at a cost of 2 crore is in progress. Got great feedback from Lee's. In the midst of all this developments, Sri Sode Vadiraja Mutt donated a school vehicle for safe travel of school children on 17-10-2022. Shri Ratnakumar, Secretary of Sri Sode Vadiraja Mutt Education Trust, Kadiyali School Administrative Officers, Mrs. Prabhathi Adiga and School Headmaster, Teachers were present on this occasion.