ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೋದೆ ಶ್ರೀ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಂಸ್ಥಾನದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣ ದೇವರಿಗೆ ಅರ್ಘ್ಯಪ್ರದಾನ ಮಾಡಿದರು. ಸಾಯಂಕಾಲ ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ರಮಾತ್ರಿವಿಕ್ರಮ ದೇವರ ಪಲ್ಲಕಿ ಉತ್ಸವ ವಿವಿಧ ವೇಷಭೂಷಣಗಳೊಂದಿಗೆ, ವಾದ್ಯ ಘೋಷಗಳೊಂದಿಗೆ ರಥಬೀದಿಯಲ್ಲಿ ನೆರವೇರಿತು.On Eve of Sri Krishna Janmashtami ,Sri Vishwavallabha Thirtha Swamiji of Sri Sode Vadiraja Matha performed special pooja to the main Dieties of Matha. During Chandrodaya time Argyapradhana was performed to Lord Sri Krishna. On 24 th August ,Vittlapindi festival was celebrated at Car Street of Sonda with Pallakki festival of Lord RamaTrivikrama . On this occasion variety of fancy dress ,depicting mythology and folk dances were present.