ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾವಿಸಮೀರ ಶ್ರೀವಾದಿರಾಜರ ತಪೋಭೂಮಿ ಸೋದಾ ಕ್ಷೇತ್ರಕ್ಕೆ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಆಗಮಿಸಿ ರಮಾ ತ್ರಿವಿಕ್ರಮ ದೇವರ, ಶ್ರೀಭೂವರಾಹ ಹಯಗ್ರೀವ ವೇದವ್ಯಾಸ ದೇವರ , ಶ್ರೀ ವಾದಿರಾಜರ, ಶ್ರೀಭೂತರಾಜರ ದರ್ಶನವನ್ನು ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು ಶ್ರೀ ಮಠದ ವತಿಯಿಂದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಗೌರವ ಸಲ್ಲಿಸಿದರು.On a Pre Paryaya tour of H H Sri Eshapriya Thirtha Swamiji, Junior Pontiff of Sri Adamaru Matha, before ascending to Sarvajna Peetha, Udupi Sri Krishna Matha, visited Sonda Kshetra, Holy place of Bhavi Sameera Sri Vaadiraja Swamiji, on the special invitation of Sri Vishwavallabha Thirtha Swamiji of Sode Vadiraja Matha. Sri Eshapriya Thirtha Swamiji performed special pooja at Sonda and had holy darshanam of Deities, Sri Ramatrivikrama, Sri Bhovaraha, Sri Hayagriva and Sri Vaadiraja, Sri Bhotharajaru.On this happy occasion, Sri Vishwavallabha Thirtha Swamiji honored Sri Eshapriya Thirtha Swamiji in a traditional manner.