Sodematha

Planting of Fruit and Medicinal Trees in Hoovinakere by Sri Vishwallabha Theertha Sripada

29 Jul, 2023

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಅವತಾರ ಭೂಮಿ ಹೂವಿನಕೆರೆಯಲ್ಲಿ  ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಶಯದಂತೆ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಹಣ್ಣಿನ ಗಿಡಗಳನ್ನು ಹಾಗೂ ಔಷಧೀಯ ವೃಕ್ಷಗಳನ್ನು ಬೆಳೆಸಲು ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಭಕ್ತರ ಮನೆಯ ಅಂಗಳದಲ್ಲೂ ಶ್ರೀಗುರುರಾಜರ ಪ್ರಸಾದ ರೂಪದ ಸಸ್ಯಗಳು ಬೆಳೆಯಬೇಕು ಎಂದು ಅನೇಕ ಬಗೆಯ ಹಣ್ಣಿನ ಗಿಡಗಳನ್ನು ಔಷಧೀಯ ಸಸ್ಯಗಳನ್ನು ಶ್ರೀಪಾದಂಗಳವರು ಭಕ್ತರಿಗೆ ವಿತರಿಸಿದರು. ಇದರ ಸಂಪೂರ್ಣ ಪ್ರಾಯೋಜಕರಾದ ಬಸ್ರೂರಿನ ವಾಸುದೇವ ಕಾಮತ್ , ಶ್ರೀ ಮಠದ   ಪ್ರಮುಖರಾದ ರಾಮಚಂದ್ರ ವರ್ಣ , ಕೃಷ್ಣ ಹತ್ವಾರ್, ಶ್ರೀನಿವಾಸ ಹತ್ವಾರ್ , ವಾದಿರಾಜ ಭಟ್ ಬೀಜಾಡಿ , ಉದಯ ಕುಮಾರ್ ಶೇಟ್ ಉಪಸ್ಥಿತರಿದ್ದರು.Plants were planted to grow fruit plants and medicinal trees in Bhavisameera Srivadiraja Gurusarvabhaumar's incarnation land, Hoovinakere with the wish of the Most Reverend Sri Vishwallabha Theertha Sripada. Sripadam distributed many types of fruit plants and medicinal plants to the devotees that Sri Guru Raja Prasad should grow in the courtyard of all devotees. Basrur's Vasudeva Kamath, Sri Mutt's head Ramachandra Varna, Krishna Hatwar, Srinivasa Hatwar, Vadiraj Bhat Bijadi, Udaya Kumar Shet were present.