Sodematha

Padukanyaasa Ritual Performed for Proposed Sri Vadiraja Gurusaarvabhoumaru Stone Sanctuary at Sonda Kshetra

13 Jul, 2024

*ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರಿಗೆ* ನೂತನವಾಗಿ ನಿರ್ಮಿಸುವ *ಭವ್ಯ ಶಿಲಾಮಯ ಮಂದಿರಕ್ಕೆ* ಪರಮಪೂಜ್ಯ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು 2024 ಜುಲೈ 12 ಶುಕ್ರವಾರದಂದು *ಪಾದುಕಾನ್ಯಾಸ* ನೆರವೇರಿಸಿದರು. ಶಿರಸಿ ಲೋಕಸಭಾ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಬಳ್ಳಾರಿ ಲೋಕಸಭಾ ಸಂಸದರಾದ ಈ.ತುಕಾರಾಮ್ ರವರು , ಸೋದೆಯ ಅರಸಪ್ಪ ನಾಯಕ ವಂಶಸ್ಥರಾದ ಮಧುಲಿಂಗ ನಾಗೇಶ ರಾಜೇಂದ್ರ ಒಡೆಯರ್ ಹಾಗೂ ದಿವಾನರಾದ ಶ್ರೀನಿವಾಸ ತಂತ್ರಿಗಳು ಉಪಸ್ಥಿತರಿದ್ದರು. ಅವಧಾನಿ ಸುಬ್ರಹ್ಮಣ್ಯ ಭಟ್ಟರು ಗುರುರಾಜರ ಭವ್ಯ ಮಂದಿರದ ವಿನ್ಯಾಸದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಪ್ಪಾಣಿ ಗುರುರಾಜ ಆಚಾರ್ಯರು ಅಭ್ಯಾಗತರನ್ನು ಸ್ವಾಗತಿಸಿದರೆ , ಬೆ. ನಾ. ವಿಜಯೀಂದ್ರ ಆಚಾರ್ಯರು ಸಭಾ ಕಾರ್ಯಕ್ರಮ ನಿರ್ವಹಿಸಿದರು. ಮಧ್ವೇಶತಂತ್ರಿ ಧನ್ಯವಾದ ಸಮರ್ಪಿಸಿದರು.ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಾನ ನೆರವೇರಿಸಿದರು.Sri Vishwavallabha Thirtha Swamiji of Sode Vadiraja Matha performed the ritual, "Padukanyaasa" of the proposed stone sanctuary(Shila  Mandira) of Sri Vadiraja Gurusaarvabhoumaru at Sonda Kshetra,on 12th July 2024.On this holy occasion,  dignitaries, Sri Vishweshwara Hegde Kaageri, Member of Parliament, Sirsi constituency, E Tukaram, member of Parliament, Bellary constituency, Sri Madhulinga Nagesh Rajendra Odeyar, lineage of Sonda Arasappa Nayak and Srinivasa Tantry,  Diwan of the Matha were present. Avadhani Sri Subramanya Bhat, Vastu consultant, briefed over the structural specialities of the proposed stone sanctuary in detail. Dr. Nippani Gururaj Acahrya welcomed the dignitaries and guests of the function. B N Vijendra Acharya performed master of ceremony. Madhwesha Tantry proposed vote of thanks. Vidwan Sri Giriraj Upadhyaya performed the religious rituals.