ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯ ಗೌರಿ ಗದ್ದೆಯಲ್ಲಿ ನೂತನ ಶಿಲಾಮಯ ಮಂದಿರದ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವವು ಶ್ರೀ ವಿಶ್ವವಲ್ಲಭ ತೀರ್ಥರ ನೇತೃತ್ವದಲ್ಲಿ ಶ್ರೀವಾದಿರಾಜ ಜಯಂತಿಯ ಪರ್ವಕಾಲದಲ್ಲಿ ವೈಭವದಿಂದ ನೆರವೇರಿತು. ಪ್ರಾತಃಕಾಲದಲ್ಲಿ ಶ್ರೀಗಳವರಿಂದ ಸಂಸ್ಥಾನ ದೇವರ ಪೂಜೆ , ಕಲಾಶಾಧಿವಾಸ , ಪ್ರತಿಷ್ಠಾ ಯಾಗ , ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆಯಿತು. ಶ್ರೀವಾದಿರಾಜರು ಅವತರಿಸಿದ ಸೂರ್ಯೋದಯದ ಸುಮುಹೂರ್ತದಲ್ಲಿ ಬಿಂಬ ಪುನಃಪ್ರತಿಷ್ಠಾಪನೆಯನ್ನು ಮಾಡಿ ಬ್ರಹ್ಮಕಲಶಾಭಿಷೇಕವನ್ನು ಶ್ರೀಗಳವರು ನೆರವೇರಿಸಿದರು. ಕೋಟೇಶ್ವರ ಮಾಗಣೆಯ ಶಿಷ್ಯವೃಂದ , ದೈವಜ್ಞ ಬ್ರಾಹ್ಮಣರ ಶಿಷ್ಯವೃಂದ ಹಾಗೂ ಅನೇಕ ಶ್ರೀ ಗುರುರಾಜರ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.Dedicatory function of newly constructed Shilamaya Temple premises , installation ceremony of Idol of Sri Vadiraja Gurusaarvabhoumaru and Brahmakalshothsava was performed with the holy presence of Sri Vishwavallabha Thirtha on the auspicious day of Vadiraja Jayanthi. The same was preceded by Samsthana pooja by Swamiji , Kalashadhivaasa, Prathistha Yaaga in the early morning.Swamiji reinstalled the idol on the auspicious time of sunrise, which is also incarnation timing of Vadiraja Swamiji,followed by Brahmakalashabhisheka.The main disciples of the Matha, Koteshwara Maagane and Daivajna community and other devotees witnessed this historic event.