Sodematha

Kavale Matha Goa Swamiji Visited Shri Madhwa Vadiraja Institute of Technology and Management

15 May, 2019

ಬಂಟಕಲ್ ನಲ್ಲಿರುವ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಗೋವಾದ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳು ದಿ. ೧೪-೫-೨೦೧೯ನೇ ಮಂಗಳವಾರ ಭೇಟಿಕೊಟ್ಟು ಕಾಲೇಜಿನ ಪ್ರಗತಿಗೆ ಹರ್ಷಿತರಾದರು. ದೇವರ ಅನುಗ್ರಹದಿಂದ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಕಾಲೇಜಿಗೆ ತಮ್ಮ ಭೇಟಿಯ ನೆನಪಿಗಾಗಿ ಸ್ವಾಮೀಜಿಯವರು ಶ್ರೀಗಂಧದ ಗಿಡವನ್ನು ನೆಟ್ಟರು. ಈ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು