*2023 ನೇ ಸಾಲಿನ ಮಟ್ಟು ಗುಳ್ಳ ಬೆಳೆಗೆ ಸೋದೆ ಮಠ ಹಾಗೂ ಕಾಣಿಯೂರು ಮಠದ ಶ್ರೀಪಾದರುಗಳಿಂದ ಚಾಲನೆ.*ಸೋದೆ ಮಠದ ಯತಿಪರಂಪರೆಯಲ್ಲಿ ಶ್ರೇಷ್ಠರಾದ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ವರಪ್ರಸಾದ ಹಾಗೂ ಔಷಧೀಯ ಗುಣವುಳ್ಳ ಮಟ್ಟು ಗುಳ್ಳ ಬೆಳೆಯನ್ನು ನಿರಂತರ ಪೋಷಿಸಿ - ಬೆಳೆಸುವ ನಿಟ್ಟಿನಲ್ಲಿ ತಾ. 01-11-2023 ರಂದು ಸೋದೆ ಮಠದ ವತಿಯಿಂದಲೇ ನಾಗಪಾತ್ರಿ ಮಟ್ಟು ಶ್ರೀ ಲಕ್ಷ್ಮಣ ರಾವ್ ಅವರ ಗದ್ದೆಯಲ್ಲಿ ಮಟ್ಟು ಗುಳ್ಳ ಬೆಳೆಯನ್ನು ಬೆಳೆದು ಮಟ್ಟು ಗ್ರಾಮದ ರೈತರನ್ನು ಪ್ರೋತ್ಸಾಹಿಸುವ ಮುಖೇನ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಜೊತೆಗೂಡಿ 2023 ನೇ ಸಾಲಿನ ಮಟ್ಟು ಗುಳ್ಳ ಬೆಳೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದಿವಾನರಾದ ಶ್ರೀನಿವಾಸ ತಂತ್ರಿಗಳು, ಹರೀಶ್ ಜೋಷಿ, ಅಜಯ್ ಶೆಟ್ಟಿ ಹಾಗೂ ಮಟ್ಟು ಗುಳ್ಳ ಬೆಳೆಗಾರರ ಸಂಘದ ಸದಸ್ಯರು ಹಾಗೂ ಮಟ್ಟು ಗ್ರಾಮದ ರೈತರು ಉಪಸ್ಥಿತರಿದ್ದರು* Inaugurated by Sodhe Mutt and Khaniyur Mutt Sripadaras for the Mattu Gulla Crop for the year 2023 *Bhavisameera Srivadiraja Gurusarvabhauma's Varaprasada and medicinal properties in the Yathi tradition of Sode Mutt, continuously nourish the crops of medicinal properties. On 01-11-2020, on behalf of Sode Mutt, Sri Sri Vishwallabha Theertha Sripadar of Sode Mutt along with Sri Sri Vishwallabha Theertha Sripadar of Khaniyur Mutt and Sri Sri Vidyallabha Theertha Sripad of Khaniyur Mutt along with Sri Sri Vidyallabha Theertha Sripadar of Khaniyur Mutt started the bullet crop of the year 2023 along with SodeSrinivasa Tantri, Harish Joshi, Ajay Shetty and Mattu Gulla Growers Association members and farmers of Mattu village were present during this occasion.