Sodematha

Doctoral Thesis on Panchika Interpretation by Vidwan Srivishnu Hatwar at Karnataka Sanskrit University

01 Aug, 2024

ಭಾವಿಸಮೀರ ಗುರುಕುಲದ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಶ್ರೀನ್ಯಾಯಸುಧಾ- ಯುಕ್ತಿಮಲ್ಲಿಕಾ ಮಂಗಲ ಮಾಡಿ ಹಾಗೂ ಪ್ರಸ್ತುತ ಭಾವಿಸಮೀರ ಗುರುಕುಲದಲ್ಲಿ ಆಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ವಾನ್ ಶ್ರೀವಿಷ್ಣು ಹತ್ವಾರ್ ಅವರು "ಶ್ರೀಮನ್ನ್ಯಾಸುಧಾ ಜಿಜ್ಞಾಸಾಧಿಕರಣ ಪರ್ಯಂತ ಪಂಚಿಕಾ ವ್ಯಾಖ್ಯಾನ ಪಾಠ ಸಮೀಕ್ಷಾತ್ಮಕ ಅಧ್ಯಯನ ಹಾಗು ಸಂಪಾದನ" ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ   ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಡಾಕ್ಟರೇಟ್ (ವಿದ್ಯಾವಾರಿಧಿ) ಪದವಿಯನ್ನು ನೀಡಿ ಗೌರವಿಸಿತು. ಕುಲಪತಿಗಳಾದ ಕರ್ನಾಟಕ ರಾಜ್ಯಪಾಲರು ಪದವಿ ಪ್ರದಾನ ಮಾಡಿದರು. ಶ್ರೀವೃಂದಾವನಾಚಾರ್ಯ ಸಂಶೋಧನಾ ಕೇಂದ್ರದ ಸಂಗ್ರಹದಲ್ಲಿದ್ದ ಹಸ್ತಪ್ರತಿಯ ಸಹಾಯದಿಂದ ಹಾಗೂ ಪ್ರೊ. ವೀರನಾರಾಯಣ ಪಾಂಡುರಂಗಿಯವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಈ ಸಂದರ್ಭದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ವಿಷ್ಣು ಹತ್ವಾರ್ ಅವರನ್ನು ಅಭಿನಂದಿಸಿದರು.Srinayasudha-Yuktimallika Mangala and currently working as Acharya at Bhavisameera Gurukul, Vidwan Srivishnu Hatwar submitted a doctorate on "Panchika interpretation lesson surveying and acquisition throughout Srimanyasudha Jignasadhikaran, Karnataka Sanskrit University doctorate ( Governor of Karnataka, who is the Chancellor, graduated. With the help of the palm in the collection of Srivrindavanacharya Research Center and Prof. The essay was presented under the guidance of Veeranarayana Pandurangi. Srivishwallabha Theertha congratulated Vishnu Hatwar on this occasion.