ಸೋದೆ ವಾದಿರಾಜ ಮಠದ ಅಂಗಸಂಸ್ಥೆಯಾದ ಶ್ರೀಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನ ಹಾಗೂ ಯೋಗ ಕ್ಷೇಮ ಟ್ರಸ್ಟ್ ಚೆನ್ನೈ ಇದರ ಸಹಯೋಗದಲ್ಲಿ ಸೋದೆ ಶ್ರೀವಾದಿರಾಜ ಮಠದಲ್ಲಿ ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ , ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರ ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ "ವೇದ ವಾಂಗ್ಮಯದ ಸಾರ್ವಕಾಲಿಕತೆ" ಎಂಬ ವಿಷಯದಲ್ಲಿ ನಡೆಯುತ್ತಿರುವ ವಿಚಾರ ಗೋಷ್ಠಿಯ ಸಮಾರೋಪ ಸಮಾರಂಭವು ಆಗಸ್ಟ್ 27ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮುರಳಿಮನೋಹರ ಪಾಠಕ್ ,ಅಯೋಧ್ಯೆಯ ರಾಮಮನೋಹರಲೋಹೀಯಾ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮಾಜಿ ಅಧ್ಯಕ್ಷರಾದ ಪ್ರೊ. ಜ್ವಲಂತಕುಮಾರ ಶಾಸ್ತ್ರೀ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಿದರು. ಚಿದಾನಂದ ಶಾಸ್ತ್ರೀ ,ವಿಷ್ಣು ಹತ್ವಾರ್ , ರಾಧಾಕೃಷ್ಣ ಬಿ. ಪ್ರಸಾದ್ ಜೋಶಿ ಪ್ರಬಂಧ ಮಂಡಿಸಿದರು. ನಿಪ್ಪಾಣಿ ಗುರುರಾಜ ಆಚಾರ್ಯರು ಕಾರ್ಯಕ್ರಮ ನಿರ್ವಹಿಸಿದರೆ , ಡಾ. ಸುಮನ್ ಆಚಾರ್ಯರು ಸ್ವಾಗತಿಸಿ ಜಂಬುಖಂಡಿ ವಾದಿರಾಜ ಆಚಾರ್ಯರು ವಂದಿಸಿದರು.Valedictoty function of National Seminar on "Perpetuity of Vedic Literature " convened under aegis of Sri Bhavi Sameera Thatvaprasaarana Trust, an unit of Sri Sode Vadiraja Matha and Yoga Kshema Trust was conducted on 27th August at Sonda. Sri Vishwavallabha Thirtha Swamiji of Sri Sode Vadiraja Matha, Sri Raghuvarendra Thirtha Swamiji of Sri Bhimanakatte Matha and Sri Vedavardhana Thirtha Swamiji of Sri Shiroor Matha graced the function and Prof. Muralimanohar Pathak, Chancellor of Lal Bahadur Shastri National University was the chief guest of the valedictoty function. Prof. Jwalanthkumar Shastri ,ex HOD of Sanskrith Department of Ramamanohar Lohia University, Ayodhya, delivered guest lecture. Ashtavadhani Sri Subramanya Bhat also spoke on the subject theme. Sri Chidananda Shastri, Vishnu Hatwar, Radhakrishba B and Prasad Joshi presented their papers on the theme. Dr. Nippani Gururaja Acharya compeered the deliberations. Dr. Sumana Acharya welcomed the gathering and Jambukhandi Vadiraja Acharya proposed vote of thanks.