Sodematha

Day 2 ವೇದ ವಾಂಗ್ಮಯದ ಸಾರ್ವಕಾಲಿಕತೆ ಎಂಬ ವಿಷಯದಲ್ಲಿ ಆಗಸ್ಟ್ 26 ರಂದು ಮೂರು ದಿವಸದ ರಾಷ್ಟ್ರೀಯ ವಿಚಾರ ಗೋಷ್ಠಿ

26 Aug, 2022

ಸೋದೆ ವಾದಿರಾಜ ಮಠದ ಅಂಗಸಂಸ್ಥೆಯಾದ ಶ್ರೀಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನ ಹಾಗೂ ಯೋಗ ಕ್ಷೇಮ ಟ್ರಸ್ಟ್ ಚೆನ್ನೈ ಇದರ ಸಹಯೋಗದಲ್ಲಿ ಸೋದೆ ಶ್ರೀವಾದಿರಾಜ ಮಠದಲ್ಲಿ ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ , ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರ ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ "ವೇದ ವಾಂಗ್ಮಯದ ಸಾರ್ವಕಾಲಿಕತೆ" ಎಂಬ ವಿಷಯದಲ್ಲಿ  ನಡೆಯುತ್ತಿರುವ ವಿಚಾರ ಗೋಷ್ಠಿಯಲ್ಲಿ ಇಂದು ಆಗಸ್ಟ್ 26ರಂದು ಮುಖ್ಯ ಅತಿಥಿಗಳಾಗಿ ದೆಹಲಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮುರಲಿಮನೋಹರ್ ಪಾಠಕ್ ಹಾಗೂ ಬಿಹಾರದ ನವ ನಲಂದಾ ಮಹಾವಿಹಾರದ ಸಂಸ್ಕೃತ ವಿಭಾಗದ ಅಧ್ಯಕ್ಷರಾದ ಪ್ರೊ. ವಿಜಯಕುಮಾರ್ ಕರ್ಣ ವಿಶೇಷ ಉಪನ್ಯಾಸ ನೀಡಿದರು. ವಿದ್ವಾಂಸರಾದ ನಿಪ್ಪಾಣಿ ಗುರುರಾಜ ಆಚಾರ್ಯ , ಡಾ. ಪ್ರತೋಷ ,ಡಾ. ಸುನೀಲ ಕೆ. ಎಸ್ . ಇವರು ಉಪನ್ಯಾಸ ನೀಡಿದರು. ಜಂಬುಖಂಡಿ ವಾದಿರಾಜ ಆಚಾರ್ಯ ಸಭಾ ನಿರ್ವಹಿಸಿ , ಕೆ. ಎಸ್ . ಸುಮನ್ ಆಚಾರ್ಯ ಸ್ವಾಗತಿಸಿ , ಆರ್.ಪಿ. ಕೃಷ್ಣಾಚಾರ್ಯ ಧನ್ಯವಾದ ಸಮರ್ಪಿಸಿದರು.Second day deliberations of the National Seminar on Perpetuity of Vedic Literature, organised under joint sponsorship of Sri Bhavi Sameera Thatvaprasaarana Pratisthaana, an unit of Sri Sode Vadiraja Matha and Yoga Kshema Trust Chennai ,was conducted on 26th August at Sonda with the holy presence of Sri Vishwavallabha Thirtha Swamiji of Sri Sode Vadiraja Matha, Sri Raghuvarendra Thirtha Swamiji of Sri Bhimanakatte Matha and Sri Vedavardhana Thirtha Swamiji of Sri Shiroor Matha.Prof. Muralimanohar Pathak, Chancellor of Lal Bahadur Shastri National University,Delhi ,was the chief guest of the function. Prof. Vijayakumar Karna, President of Sanskrith Department of NavaNalanda Vihara, Bihar, delivered guest lecture on the theme.Scholors, Dr. Nippani  Gururaja Acharya, Dr. Prathosh,Dr.Sunil K S also gave thier lectures on the subject matter.Jambukhandi Vadiraja Acharya co ordinated today s deliberations. Sri K S Suman Acharya welcomed the gathering, whereas Sri R P Krishnacharya, proposed vote of thanks.