ಆಷಾಡ ಬಹುಳ ಅಮಾವಾಸ್ಯೆಯಂದು ಸೋದೆ ಮಠದ ಗುರುಪರಂಪರೆಯಲ್ಲಿ ವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ತಪಸ್ವೀ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥರ ಆರಾಧನೆ ಹಾಗು ಅವರ ಶಿಷ್ಯರಾದ ವಿಕ್ಟೋರಿಯಾ ರಾಣಿಯಿಂದ ಪುರಸ್ಕೃತರಾದ ಅಪ್ರತಿಮ ವಾಗ್ಮಿ ಶ್ರೀ ವಿಶ್ವಾಧೀಶ ತೀರ್ಥರ ಆರಾಧನೆ.ಆ ಪ್ರಯುಕ್ತ ಅವರ ಮೂಲ ವೃಂದಾವನವಿರುವ ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಸೊದೆಯಲ್ಲಿರುವ ಅವರ ಮೃತ್ತಿಕಾ ವೃಂದಾವನಕ್ಕೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀ ವಿಶೇಷ ಪೂಜೆ ನೆರವೇರಿಸಿದರು.Ashadha Bahula Amavasya is the date of Araadhana of Ascetic Pontiff of Sri Sode Vadiraja Matha Udupi, H H Sri Vishwapriya Thirtha Swamiji, popularly known as Vrundavanaacharya and also H H Sri Vishwadheesha Thirtha Swamiji, Peerless Orator, who was greatly honored by Victoria Queen of England. Paryaya Sri Vidhyadheesha Thirtha Swamiji of Sri Palimar Matha performed special Pooja to Moola Vrindavana of both the Swamijis in Krishna Matha's Vrindavana complex.Sri Vishwavallabha Thirtha Swamiji of Sri Sode Vadiraja Matha also performed special Pooja to Mruthika Vrindavana of Sri Vrindavanaacharya at Sonda.