Sodematha

Aradhana Pareekshe - annual exam of Shaasthra and Vedas

06 Mar, 2022

ಚ್ಯುತಿ ರಹಿತವಾದ ಆಗಮಗಳಿಂದ ಮಾತ್ರ ಅಚ್ಯುತನ ಜ್ಞಾನ ಸಾಧ್ಯ. ಸಕಲ ಶಾಸ್ತ್ರಗಳಿಗೂ ಆಧಾರಭೂತವಾದ್ದು ವೇದಗಳು. ಈ ಹಿನ್ನೆಲೆಯಲ್ಲಿ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಸಂಕಲ್ಪದಂತೆ  ಶ್ರೀಮಠದ ಅಂಗಸಂಸ್ಥೆಯಾದ "ಶ್ರೀ ಭಾವಿಸಮೀರತತ್ವಪ್ರಸಾರಣಪ್ರತಿಷ್ಠಾನ" ಎಂಬ ಸಂಸ್ಥೆಯ ಮೂಲಕ ಶ್ರೀಗುರುರಾಜರ ಆರಾಧನಾಂಗವಾಗಿ "ಆರಾಧನಾ ಪರೀಕ್ಷೆ" ಎಂಬ ಶೀರ್ಷಿಕೆಯಲ್ಲಿ ವಾರ್ಷಿಕವಾಗಿ ಶಾಸ್ತ್ರ ಹಾಗೂ ವೇದಗಳ ಪರೀಕ್ಷೆ ನಡೆಸುವುದಾಗಿ ಸಂಕಲ್ಪಿಸಿದ್ದು, ಪರೀಕ್ಷೆಯ ಒಂದು ಭಾಗವಾದ ವೇದಪರೀಕ್ಷೆಯು ದಿನಾಂಕ 01-03-2022 ರಿಂದಾರಂಭಿಸಿ 03-03-2022 ರ ತನಕ ಯಶಸ್ವಿಯಾಗಿ ನಡೆಯಿತು. ದೇಶದ ನಾನಾಭಾಗಗಳಿಂದ ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ಉತ್ತಮ ಶ್ರೇಣಿಗಳಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಗಳಲ್ಲಿ ನಿರ್ಣಾಯಕರಾಗಿ ಋಗ್ವೇದ ವಿಭಾಗದಲ್ಲಿ ಪ್ರಸಿದ್ಧರಾದ ಶ್ರೀರಂಗಂನ ವಿಜಯೀಂದ್ರ ಸಲಕ್ಷಣಘನಪಾಠೀ ಶ್ರೀಮಧುಸೂದನ ಆಚಾರ್ಯ ಹಾಗೂ ಶೃಂಗೇರಿಯ ಘನಪರೀಕ್ಷೆಯಲ್ಲಿ ಸ್ವರ್ಣಾಂಗುಲಿ ಪಡೆದ ರಾಮಕೃಷ್ಣ ಘನಪಾಠೀ ಮತ್ತು ಯಜುರ್ವೇದ ವಿಭಾಗದಲ್ಲಿ ಮೈಸೂರು ದತ್ತಪೀಠ ಪಾಠಶಾಲೆಯ ಪ್ರಾಂಶುಪಾಲರಾದ ಕರ್ನಾಟಕ ವಿಭಾಗೀಯ TTD ಯ ವೇದಪಾರಾಯಣಾಧಿಕಾರಿಗಳಾದ ಹರಿವೀರಭದ್ರ ಘನಪಾಠೀ ಹಾಗೂ ತಿರುಪತಿಯ ಎಂಡೋಮೆಂಟ್ ನ ಪಾರಾಯಣಾಧಿಕಾರಿಗಳಾದ ಕಾಮೇಶ್ವರ ಘನಪಾಠೀ ಇವರೇ ಮೊದಲಾದವರು ಕಾರ್ಯನಿರ್ವಹಿಸಿದರು. ಇವರೆಲ್ಲರೂ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಈ ಶ್ರೇಷ್ಠ ಸಂಕಲ್ಪವನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರು.           ಈ ಪರೀಕ್ಷೆಗಾಗಿ ಬಂದ ವಿದ್ಯಾರ್ಥಿಗಳೂ ತಮ್ಮ ಜೀವನದ ಪರಿಶ್ರಮವನ್ನೆಲ್ಲಾ ಪರೀಕ್ಷಕರ ಮುಂದೆ ಅನಾವರಣಗೊಳಿಸಿ ಧನ್ಯತಾಭಾವವನ್ನು ಪಡೆದರು. ಈ ಕಾರ್ಯಕ್ರಮದ ಉದ್ಘಾಟನೆಯು ಯೋಜಕರಾದ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯ ಅಧ್ಯಕ್ಷತೆಯಲ್ಲಿ ಹಾಗು ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದ ವರ್ಧನತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಈ. ದೇವನಾಥನ್  ಇವರು ಆನ್ಲೈನ್ ಮೂಲಕ ಭಾಗವಹಿಸಿ ಶ್ರೀಪಾದರ ಈ ಸತ್ಸಂಕಲ್ಪವನ್ನು ಮನ:ಪೂರ್ವಕವಾಗಿ  ಗೌರವಿಸಿದರು. ಹಾಗೂ ಗುರುರಾಜರ ಯುಕ್ತಿಮಲ್ಲಿಕಾದಿಗ್ರಂಥಗಳ ಮಹತ್ವವನ್ನು ನೆನೆದು, ವೇದಾಧ್ಯಯನದ ಅವಶ್ಯಕತೆಯ ಬಗ್ಗೆ ಜಯತೀರ್ಥರ ಮಾತನ್ನುದ್ಧರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.Through Blemishless Aagama shashtras only one can achieve and have full knowledge about Almighty God . Hence Vedas are the base of all shashtraas. With this backdrop, Sri Vishwavallabha Thirtha Swamiji of Sri Sode Vadiraja Matha has organized a unique Programme of conducting the annual exam of Shaasthra and Vedas under the banner of Sri Bhavi Sameera Thatvaprasaarana Pratisthaana, a unit of Sri Matha under the nomenclature  "Aradhana Pareekshe " on the occasion of Aradhana Festival of Sri Vadiraja Gurusaarvabhoumaru. As a part of this exam, Veda Exam was conducted from 01/03/2022 to  03/03/2022 at Sonda.  Students from different parts of the country participated in this exam with great enthusiasm and zeal and excelled with distinction.Sri Madhusoodan Acharya noted Scholar and Vijayeendra Salakshanaghanapaathi from Srirangam and Sri Ramakrishna Ghanapaathi, Swarnaanguli awardee of Sringeri  Ghanaparrekshe were the main juries for Rigveda section. Sri Hariveerabhadra Ghanapaathi, Principal of Mysore Dathapeetha Paathashaale and Vedaparayaanadhikari of Karnataka Region TTD and Sri Kameshwara Ghanapaathi, Parayanadhikaari of Tirupathy Endowment were main juries for the Yajurveda section. All the scholars who participated in this great event wholeheartedly welcomed and appreciated the great concept of Sode Swamiji. Students who participated in this exam exhibited their lifetime achievements before the juries and they were happy. The inaugural function was graced by Sri Vishwavallabha Thirtha Swamiji of Sri Sode Vadiraja Matha and Sri Vedavardhana Thirtha Swamiji of Sri Shiroor Matha. Sri K E  Devanathan,  chancellor of Karnataka Sanskrith University participated in this great event online and appreciated this great concept of Sode Swamiji. He spoke on this occasion, duly stressing the need for the Study of Vedas quoting the wordings of Sri Jayathirtha, and also explained the greatness and importance of the Literature of Sri Vadiraja Gurusaarvabhoumaru like Yukthimallika, etc.