Sodematha

Aaradhana Festival of two great pontiffs

20 Jul, 2020

ಆಷಾಢ ಬಹುಳ ಅಮಾವಾಸ್ಯೆ ,ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ ತಪಸ್ವೀ ಯತಿಗಳಾದ ವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ವಿಶ್ವಪ್ರಿಯ ತೀರ್ಥರ ಹಾಗೂ ಅವರ ಶಿಷ್ಯರಾದ ವಿಕ್ಟೋರಿಯಾ ರಾಣಿಯಿಂದ ಪುರಸ್ಕೃತರಾದ ಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಶ್ರೀ ಸೋದಾ ಕ್ಷೇತ್ರದಲ್ಲಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ  ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಹಾಗೂ ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಶ್ರೀವಾದಿರಾಜ ಜಮಖಂಡಿಯವರು ವೃಂದಾವನಾಚಾರ್ಯರ ಜೀವನ ಚರಿತೆಯ ಕುರಿತು ಉಪನ್ಯಾಸ ನೀಡಿದರು. ಉಭಯ ಶ್ರೀಪಾದಂಗಳವರು ಆರಾಧನಾ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಉಡುಪಿ ಕೃಷ್ಣ ಮಠದ ವೃಂದಾವನ ಸಮುಚ್ಛಯದಲ್ಲಿರುವ ಮೂಲವೃಂದಾವನ ಸನ್ನಿಧಿಯಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ನೆರವೇರಿಸಿದರು.Aaradhana Festival of two great pontiffs in the lineage of Sri Sode Vadiraja Matha, Sri Vishwapriya Thirtha Swamiji, more popularly known as  Vrundavanacharya, and his disciple, Sri Viswadheesha  Thirtha Swamiji, who was honored by Queen Victoria of England, were performed at Sonda Kshetra on Monday, Aashadha Bahula Amavasya. Sri Vishwavallabha Thirtha Swamiji of Sri Sode Vadiraja Matha and Sri Raghuvarendra Thirtha Swamiji of Bhimanakatte Matha performed special Pooja to Mruthikaa Vrundavana of the pontiffs at Sonda, followed by Religious discourse by Scholar, in which, Vadiraja Jamakhandi,  spoke on the life history of Sri Vrundavanacharya. Both Swamiji's of Sri Sode Vadiraja Matha and Sri Bhimasethu Munivrunda Matha, gave Anugraha Sandesha.On this holy occasion, Sri Eeshapriya Thirtha Swamiji of Sri Adamaru Matha performed Pooja to Moola Vrundavana at Udupi Krishna Matha.