Sodematha

61st National Sanskrit Classical Competitions at world famous Sriramanagari Ayodhya

12 Jan, 2024

ಜಗತ್ಪ್ರಸಿದ್ಧ ಶ್ರೀರಾಮನಗರಿ ಅಯೋಧ್ಯೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ 61ನೆಯ ರಾಷ್ಟ್ರೀಯ ಸಂಸ್ಕೃತ ಶಾಸ್ತ್ರೀಯ ಸ್ಪರ್ಧೆಗಳಿಗೆ ಅರ್ಹತೆಗಾಗಿ ಬೆಂಗಳೂರಿನಲ್ಲಿ  ರಾಜ್ಯಮಟ್ಟದ ಸ್ಪರ್ಧೆಗಳು ನಡೆಯಿತು. ಇದರಲ್ಲಿ ಭಾಗವಹಿಸಿದ ನಮ್ಮ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಲ್ಲಿ 'ವೇದಾಂತ ಭಾಷಣ' ಸ್ಪರ್ಧೆಯಲ್ಲಿ ಸುದರ್ಶನ ಎಂಬ ವಿದ್ಯಾರ್ಥಿಯು ಪ್ರಥಮ ಬಹುಮಾನವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. 'ಪುರಾಣೇತಿಹಾಸ ಶಲಾಕ' ಎಂಬ ಸ್ಪರ್ಧೆಯಲ್ಲಿ ಪ್ರಭಂಜನ ಗಣಾಚಾರಿ ದ್ವಿತೀಯ ಬಹುಮಾನವನ್ನು , 'ಸಮಸ್ಯಾಪೂರ್ತಿ' ಸ್ಪರ್ಧೆಯಲ್ಲಿ ಸಂಜಯ ಬುಧ್ಯ ಎಂಬ ವಿದ್ಯಾರ್ಥಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀಮತಿ ಅಹಲ್ಯಾ ಶರ್ಮ ಹಾಗೂ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ  ಮಾನ್ಯ ಶ್ರೀನಿವಾಸ ಬಳ್ಳಿ ಮುಂದಾದ ಗಣ್ಯರು ಬಹುಮಾನವನ್ನು ವಿತರಿಸಿದರು. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.State level competitions held in Bangalore for qualification for the 61st National Sanskrit Classical Competitions held in the month of February at world famous Sriramanagari Ayodhya. Among the students of our Bhavisameer Gurukul who participated in thisA student named Sudarshan won the first prize in the 'Vedanta speech' competition and got selected for the national level competition. Prabhanjana Ganachari won second prize in the competition called 'Puranethihasa Shalaka', a student named Sanjaya Budhya won second prize in the 'Samasyapurthi' competition. Dignitaries of Sanskrit University, Chancellor of Sanskrit University, Mrs. Ahalya Sharma and Chancellor of Nrupatunga University, Honorable Srinivasa Balli distributed the prizes at the meeting program held at Sanskrit University. Sri Vishwallabha Theertha Sripadam congratulates all the students who won the prize.